ಸ್ಮಿಶಿಂಗ್ ಎನ್ನುವುದು 'ಫಿಶಿಂಗ್' ನ ಮತ್ತೊಂದು ರೂಪಾಂತರವಾಗಿದೆ, ಇದರಲ್ಲಿ ಒಂದು ಕಿರು ಸೇವಾ ಸಂದೇಶ (SMS) ಅಥವಾ ಪಠ್ಯ ಸಂದೇಶವನ್ನು ಹಣಕಾಸಿನ ವಂಚನೆಗಳನ್ನು ಮಾಡಲು ಬಳಕೆದಾರರ ವೈಯಕ್ತಿಕ/ಹಣಕಾಸಿನ ಮಾಹಿತಿಯನ್ನು ಸಂಗ್ರಹಿಸುವ ಪ್ರಯತ್ನದಲ್ಲಿ ಬಳಸಲಾಗುತ್ತದೆ.

ಹೆಚ್ಚಾಗಿ ಪಠ್ಯ ಸಂದೇಶಗಳು ವಂಚನೆ ಪಡಿಸುವಂತವು, ನೋಡಲು ಅವು  ಅಧಿಕೃತ ಮೂಲದಿಂದ ಬಂದಿರುವಂತೆ ತೋರುತ್ತದೆ

ಬಳಕೆ ದಾರರು ಮೋಸದ ಮಾಲ್‌ವೇರ್ ಸೋಂಕಿತ ಲಿಂಕ್‌ಗಳನ್ನು ಸಹ ಸ್ವೀಕರಿಸಬಹುದು. ಇವು ಕಾನೂನು ಬದ್ದ ಸೈಟ್ ನಂತೆ ಕಂಡರೂ ಫೇಕ್ ವೆಬ್ ಸೈಟ್ ಗೆ ಕೊಂಡೊಯ್ಯುವ  ಮೂಲಕ ನಿಮ್ಮ ಮಾಹಿತಿ ಸಂಗ್ರಹಿಸಬಹುದು

ಸ್ಟೈಶಿಂಗ್ ಹೇಗೆ ಕೆಲಸ ಮಾಡುತ್ತೆ ? ಸ್ಟೈಶಿಂಗ್ ಕೆಲಸ ಮಾಡುವ ರೀತಿ

  • ಬಳಕೆದಾರರು ಲಿಂಕ್‌ಗಳು/ ಕೊಡುಗೆಗಳ ಪೋಸ್ಟ್‌ಗಳು / ಉಡುಗೊರೆಗಳು/ಬಹುಮಾನಗಳ ಸಂದೇಶಗಳನ್ನು ಸ್ವೀಕರಿಸುತ್ತಾರೆ.
  • ಬಳಕೆದಾರರನ್ನು ಅನುಮಾನಾಸ್ಪದ ಸೈಟ್‌ಗಳು/ಲಿಂಕ್‌ಗಳಿಗೆ ಮರುನಿರ್ದೇಶಿಸುತ್ತದೆ
  • ವೈಯಕ್ತಿಕ ಮಾಹಿತಿಯನ್ನು ಒದಗಿಸಲು ಬಳಕೆದಾರರನ್ನು ವಿನಂತಿಸುತ್ತದೆ / ಲಿಂಕ್‌ಗಳನ್ನು ಕ್ಲಿಕ್ ಮಾಡಿ/ಸಾಫ್ಟ್‌ವೇರ್ ಡೌನ್‌ಲೋಡ್ ಮಾಡಲು ಪ್ರೇರೇಪಿಸುತ್ತದೆ
  • ಡೇಟಾ ಸೋರಿಕೆಗಳು, ಮಾಲ್‌ವೇರ್/ವೈರಸ್ ದಾಳಿಗಳು ಮತ್ತು ಸೈಬರ್ ವಂಚನೆಗಳಿಗೆ ಕಾರಣವಾಗುತ್ತದೆ.